FLASH NEWS

ಎಲ್ಲರಿಗೂ ಶುಭಾಶಯಗಳು

Monday 2 September 2019

Karate Class



                                                  Karate Class


                                                           Onam Celebration


                                                         Independence Day Celebration

                                                   Agriculture Day Celebration

Friday 2 February 2018

PRADESHIKA KALIKA KENDRA

                                   ಪ್ರಾದೇಶಿಕ ಪ್ರತಿಭಾ ಕೇಂದ್ರ
      ದಿನಾಂಕ 04-01-2018 ಗುರುವಾರ ಅಪರಾಹ್ನ 3.00 ಗಂಟೆಗೆ ಪ್ರಾದೇಶಿಕ ಪ್ರತಿಭಾ ಕೇಂದ್ರವನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಉಪಾಧ್ಯಕ್ಷರಾದ ಶ್ರೀ ಆನಂದ ಕೆ. ಮವ್ವಾರ್ ಅವರು ಉದ್ಘಾಟಿಸಿದರು.ಸ್ಥಳೀಯವಾರ್ಡು ಸದಸ್ಯೆ  ಶ್ರೀಮತಿ ಶೈಲಜಾ ನಡುಮನೆ ಅಧ್ಯಕ್ಷತೆ ವಹಿಸಿದ್ದರು. ಪಿ.ಟಿ.ಎ.ಅಧ್ಯಕ್ಷರಾದ ಶ್ರೀ ಸಂತೋಷ್ ಕುಮಾರ್ ರೈ ಪುತ್ರಕಳ ಉಪಸ್ಥಿತರಿದ್ದರು. ಎಸ್. ಸಿ,  ಎಸ್.ಟಿ,  ವಿಭಾಗದ ಮಕ್ಕಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಪ್ರಾದೇಶಿಕ ಪ್ರತಿಭಾ ಕೇಂದ್ರ ಸಹಕಾರಿಯಾಗಲಿ ಎ೦ದು ಉದ್ಘಾಟಕರು ಹೇಳಿದರು.ಎಸ್. ಸಿ, ವಿಭಾಗದ 18 ಮಕ್ಕಳು , ಎಸ್.ಟಿ,  ವಿಭಾಗದ28 ಮಕ್ಕಳು ಈ ಪ್ರತಿಭಾ ಕೇಂದ್ರದ ಸದಸ್ಯರಾಗಿರುವರು. ಪಾರ್ವತಿ ಕುದಿಂಗಿಲ ಅವರು ಪ್ರತಿಭಾ ಕೇಂದ್ರದ ಅಧ್ಯಾಪಿಕೆಯಾಗಿ ಆಯ್ಕೆಯಾದರು. ಪಿ.ಟಿ.ಎ. ಸದಸ್ಯರು ಸಭೆಯಲ್ಲಿ ಭಾಗವಹಿಸದ್ದರು.

Monday 29 January 2018

sweet gourd


sweet gourd at school

School day celebration

                                                             School day celebration

ಶಾಲಾವಾರ್ಷಿಕೋತ್ಸವವು 26-01-2018ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಗ್ಗೆ ಧ್ವಜಾರೋಹಣದೊ೦ದಿಗೆ ಕಾರ್ಯಕ್ರಮ ಆರ೦ಭಗೊ೦ಡಿತು. ನ೦ತರ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಉಪಾಧ್ಯಕ್ಷರಾದ ಶ್ರೀ ಆನಂದ ಕೆ ಮವ್ವಾರ್ ವಹಿಸಿದ್ದರು. ಕುಂಬಳೆ ಉಪಜಿಲ್ಲಾ ಸಹಾಯಕ ಶಿಕ್ಷ ಣಾಧಿಕಾರಿಗಳಾದ ಶ್ರೀ ಕೈಲಾಸ ಮೂರ್ತಿ ಹಾಗು ಪೇರಾಲ್ ಶಾಲಾ ಮುಖ್ಯ ಶಿಕ್ಷಕ ಶ್ರೀ ಗುರುಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕು೦ಬ್ಡಾಜೆ ಗ್ರಾಮ ಪ೦ಚಾಯತ್ ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಯಶೋದ, ಸ್ಥಳೀಯವಾರ್ಡು ಸದಸ್ಯೆ ಶ್ರೀಮತಿ ಶೈಲಜಾ ನಡುಮನೆ , ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಎಲಿಜಬೆತ್ ಕ್ರಾಸ್ತ , ಕು೦ಬ್ಡಾಜೆ ಪಿಇಸಿ ಕಾರ್ಯದರ್ಶಿ ಶ್ರೀ ಬಾಲಕೃಷ್ಣ ಮಾಸ್ತರ್ ಶುಭ ಹಾರೈಸಿ ಮಾತನಾಡಿದರು.ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆಸಿದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ.ವರದಿ ವಾಚಿಸಿದರು.ಶಾಲಾ ವ್ಯವಸ್ಥಾಪಕರಾದ ಶ್ರೀ ವೈ. ಶ್ರೀಧರ್ ಸ್ವಾಗತಿಸಿದರು.ಅಧ್ಯಾಪಿಕೆ ಶ್ರೀಮತಿ ಸರೋಜ ಎನ್, ಕೆ. ವಂದಿಸಿದರು.ಅಪರಾಹ್ನ ಮಕ್ಕಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ ಜರಗಿತು.ಅಧ್ಯಾಪಕರೂ,ರಕ್ಷಕರೂ, ವಿದ್ಯಾಭಿಮಾನಿಗಳು ಮತ್ತು ಮಕ್ಕಳು ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು

Sunday 24 December 2017

shraddha


ಶ್ರದ್ಧ” ಆರಂಭ
ಏತಡ್ಕ ಎ.ಯು.ಪಿ. ಶಾಲೆಯಲ್ಲಿ ದಿನಾಂಕ 09.12.2017 ಶನಿವಾರದ೦ದು “ಶ್ರದ್ಧ”ಕಾರ್ಯಕ್ರಮ ಆರಂಭಿಸಲಾಯಿತು. ಕಲಿಕೆಯಲ್ಲಿ ಹಿಂದು ಳಿಯುವಿಕೆಯಲ್ಲಿರುವ ಮಕ್ಕಳನ್ನು ಕಂಡು ಕೊಂಡು ಸ ಹಾಯ ಮಾಡುವು ದು ,ಅವರುಕ ಲಿಕೆಯಲ್ಲಿ ಮುಂದೆ ಬರುವು ದಕ್ಕಿ ರುವ ದಾರಿಯನ್ನು ಸಿದ್ದಪಡಿಸುವ ದು ಈ ಕಾರ್ಯ ಕ್ರಮದ ಉ ದ್ದೇಶ ವಾಗಿದೆ . ಆರಂಭದ ಹಂತದಲ್ಲಿ 3ಮತ್ತು 5 ತರಗತಿಗಳಲ್ಲಿ ಕನ್ನ ಡ, ಇಂಗ್ಲೀಷ್ , ಗ ಣಿತ, ವಿಜ್ಞಾನ, ವಿಷಯಗಳಲ್ಲಿ ಕಲಿಕಾ ಸಮಸ್ಯೆ ಯನ್ನು ಅನುಭವಿ ಸುವವರನ್ನು ಪರಿಗಣಿಸಲಾಗುತ್ತದೆ ಎ೦ದು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೋಜ .ಪಿ. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿ,ಎಲ್ಲರನ್ನು ಸ್ವಾಗತಿಸಿದರು.ಕಾರ್ಯಕ್ರಮವನ್ನು ಕು೦ಬ್ಡಾಜೆ ಗ್ರಾಮ ಪ೦ಚಾಯತ್ ಸದಸ್ಯೆ ಶ್ರೀಮತಿ ಎಲಿಜಬೆತ್ ಕ್ರಾಸ್ತ ಉದ್ಘಾಟಿಸಿ ಮಕ್ಕಳು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳ ಬೇಕೆಂದು ಹೇಳಿ ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕಿಶೋರ್ ಕುಂಡಾಪು ವಹಿಸಿದ್ದು “ಶ್ರದ್ಧ”ಕಾರ್ಯಕ್ರಮವು ಕಲಿಕೆಯಲ್ಲಿ ಹಿಂದುಳಿಯುವಿಕೆಯಲ್ಲಿರುವ ಮಕ್ಕಳ ಸಮಸ್ಯೆಯನ್ನು ನೀಗುವಲ್ಲಿ ಸಫಲವಾಗಲಿ ಎ೦ದು ಹೇಳಿದರು.ಅಧ್ಯಾಪಕ ಶ್ರೀ ರಾಜಾರಾಮ ಕೆ.ವಿ. ವಂದಿಸಿದರು.

Sunday 10 December 2017

ನಮ್ಮ ಶಾಲಾ ತರಕಾರಿ ತೋಟ

                                                              ನಮ್ಮ ಶಾಲಾ ತರಕಾರಿ ತೋಟ

Wednesday 15 November 2017

Youth festival

ಸಂಸ್ಕೃತ ಅಕ್ಷರ ಶ್ಲೋಕದಲ್ಲಿ  ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದು
 ಜಿಲ್ಲಾ ಮಟ್ಟದ ಸ್ಪರ್ಧೆಗೆ  ಆಯ್ಕೆಯಾದ ವಿದ್ಯಾರ್ಥಿನಿ
ಶ್ರೀ ಅನೂಷಾನಾತ್ ವಿ
 ಅಭಿನಂದನೆಗಳು

ಕನ್ನಡ ಕಥೆ ಹೇಳುವುದರಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಇಂಗ್ಲೀಷ್  ಅಭಿನಯ ಗೀತೆಯಲ್ಲಿ ಎ ಗ್ರೇಡಿನೊಂದಿಗೆ
 ದ್ವಿತೀಯ ಹಾಗು ಕನ್ನಡ ಅಭಿನಯ ಗೀತೆಯಲ್ಲಿ ಎ ಗ್ರೇಡಿನೊಂದಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ
 ಶ್ರೀನಿಕಾ ವಿ
 ಅಭಿನಂದನೆಗಳು

ಗಣಿತ ಸೆಮಿನಾರ

                   ಕುಂಬಳೆ ಉಪಜಿಲ್ಲಾ ಮಟ್ಟದಲ್ಲಿನಡೆದ ಗಣಿತ ಸೆಮಿನಾರಿನಲ್ಲಿ ಎ ಗ್ರೇಡಿನೊಂದಿಗೆ
                     ದ್ವಿತೀಯ ಸ್ಥಾನ ಪಡೆದ ನಮ್ಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ ಕೆ

Thursday 12 October 2017

ವಿದ್ಯಾರಂಗ ಕಲಾಸಾಹಿತ್ಯ ವೇದಿ ಅವಿಲು ಗೋಷ್ಠಿ

             ವಿದ್ಯಾರಂಗ ಕಲಾಸಾಹಿತ್ಯ ವೇದಿ ಆಶ್ರಯದಲ್ಲಿ ಚುಟುಕು ರಚನಾ ಶಿಬಿರ ಶ್ರೀ ಕಕ್ಕೆಪ್ಪಾಡಿ ಶಂಕರನಾರಾಯಣ ಭಟ್ಟರವರಿಂದ

Monday 2 October 2017

ದಸರಾ ನಾಡಹಬ್ಬ ಹಾಗು ಶ್ರೀ ಶಾರದಾ ಮಹೋತ್ಸವ

               ದಸರಾ ನಾಡಹಬ್ಬ ಶಾರದಾ ಮಹೋತ್ಸವ ಆಚರಣೆ
ಏತಡ್ಕ ಎ.ಯು.ಪಿ. ಶಾಲೆಯಲ್ಲಿ ದಿನಾಂಕ 30.09.2017 ಶನಿವಾರದ೦ದು ದಸರಾ ನಾಡಹಬ್ಬವನ್ನು ಮತ್ತು ಶಾರದಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು, ಶಾಲಾ ಮಕ್ಕಳಿಂದ ಗದಾಯುದ್ಧ ಎ೦ಬ ಯಕ್ಷಗಾನ ತಾಳಮದ್ದಳೆ ಜರಗಿತು. ಚಿಣ್ಣರು ಅರ್ಥವಾದಿಗಳಾಗಿ, ವೀರ,ಹಾಸ್ಯ ,ಕರುಣಾ ರಸಗಳನ್ನು ತಮ್ಮ ಭಾವ ಪ್ರತಿಪಾದನೆಯಲ್ಲಿ ಯಶಸ್ವಿಯಾದರು. ಅರ್ಪಿತಾ, ರಮ್ಯ, ಗ್ರೀಷ್ಮಾ,ಅನುಷಾನಾಥ್,ಮೊದಲಾದ ವಿದ್ಯಾರ್ಥಿಗಳು ಪ್ರಧಾನ ಭೂಮಿಕೆಯಲ್ಲಿ ರಂಗ ವೈಭವೀಕರಿಸಿದರು. ಬಳಿಕ ಶ್ರೀ ಲಕ್ಷ್ಮೀಶ ಕಡಂಬಳಿತ್ತಾಯರ ನೇತ್ರತ್ವದಲ್ಲಿ ಶಾರದಾ ಮಾತೆಯನ್ನು ಪೂಜಿಸಲಾಯಿತು ಹಾಗು ಚಿಣ್ಣರಿಗೆ ವಿದ್ಯಾರಂಭ ಕಾರ್ಯಕ್ರಮ ನಡೆಯಿತು. ಪುಸ್ತಕ ಪೂಜೆಯ ನಂತರ ಪ್ರಸಾದ ಸ್ವೀಕರಿಸಿ, ತಮ್ಮ ಪುಸ್ತಕ ಓದಿದರು.
ಅಪರಾಹ್ನ ನಾಡಹಬ್ಬ ಕಾರ್ಯಕ್ರಮ ಜರಗಿತು. ಶಾಲಾ ಮಕ್ಕಳಿಗಾಗಿ ನಾಡ ಗೀತೆ,ಜಾನಪದ ಗೀತೆ ಸ್ಪರ್ಧೆಗಳು ನಡೆದುವು. ಸಭಾ ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶ್ರೀ ಕಿಶೋರ್ ಕುಂಡಾಪು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ಬೇ. ಸೀ. ಗೋಪಾಲ ಕೃಷ್ಣ ಭಟ್ ಭಾಗವಹಿಸಿದ್ದರು. ಇಂದಿನ ಹಾಗು ಹಿಂದಿನ ಕಾಲದ ನಾಡಹಬ್ಬ ಆಚರಣೆಯ ಮಹತ್ವವನ್ನು ವಿವರಿಸಿದರು ಮತ್ತು ಕಾಸರಗೋಡಿನ ಈನೆಲದಲ್ಲಿ ದಸರಾ ನಾಡಹಬ್ಬ ಕನ್ನಡಿಗರ ಏಕೀಕರಣಕ್ಕೆ ಸೂಕ್ತ ವೇದಿಕೆ ಎ೦ದರು.ವಿದ್ಯಾರ್ಥಿಗಳಿಂದ ವೈವಿಧ್ಯಮಯ ನಾಡ ಗೀತೆಗಳ ಗಾಯನ ಮನರಂಜಿಸಿತು. ನಿವೃತ್ತ ಅಧ್ಯಾಪಕ ಶ್ರೀ ಎ೦. ಗೋಪಾಲ ಕೃಷ್ಣ ಭಟ್ ಅವರ ಜಾನಪದ ಗೀತೆ ಗಾಯನ ಸಭಿಕರನ್ನು ಭಾವುಕರನ್ನಾಗಿಸಿತು.ಹಿರಿಯರಾದ ಸಾವಿತ್ರಿ.ಕೆ.ಭಟ್ ತಮ್ಮ ಹಾಡಿನ ಮೂಲಕ ಶುಭ ಹಾರೈಸಿದರೆ, ಶ್ರೀಮತಿ ಸೌಮ್ಯ ನೆಲ್ಲಿಮೂಲೆ ತಮ್ಮ ಮಾತುಗಳ ಮೂಲಕ ಶುಭ ಹಾರೈಸಿದರು.ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಹೀಗೆ ಹಲವು ಕಾರ್ಯಕ್ರಮಗಳಿಂದ ಕನ್ನಡದ ಕಂಪನ್ನು ಸೂಸಿ ನಾಡಹಬ್ಬ ಕಾರ್ಯಕ್ರಮ ಸಂಪನ್ನಗೊಂಡಿತು.

                                    ದಸರಾ ನಾಡ ಹಬ್ಬ ಹಾಗು ಶ್ರೀ ಶಾರದಾ ಮಹೋತ್ಸವ

Saturday 30 September 2017

Dance Class

                                                         Dance class started on Vijaya dashami day